ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಸಂಕಲ್ಪ ಪ.ಪೂ ಕಾಲೇಜಿನ ಶೇ 90 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಗಂಗಾವತಿ: ಗಂಗಾವತಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಮಾರ್ಚ್ 2026 ರ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಶೆಕಡಾ 90% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅಮೋಘ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಮೋಘಗೌಡ ತಂದೆ ಸೂರ್ಯಪ್ರಕಾಶಗೌಡ 582, (97%)., ಜಿ ನಿಶ್ಚಿತಾ ತಂದೆ ರಾಘವೇಂದ್ರ 568 (94.67%)., ದ್ರಾಕ್ಷಾಯಿಣಿ ತಂದೆ ರಾಮಣ್ಣ 558 (93%), ಅದೇರೀತಿ ಕಲಾ ವಿಭಾಗದಲ್ಲಿ ಅಕ್ಷೀತಾ ತಂದೆ ಆನಂದ 573 (95.50%), ಚೈತ್ರ ತಂದೆ ಭಿಮಣ್ಣ 572 (95.33%), ವೀರಭದ್ರಪ್ಪ ತಂದೆ ಸೊಮಪ್ಪ 567 (94.50%) ಈ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 32 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಹಾಗೂ 11 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಒಟ್ಟು 220 ವಿದ್ಯಾರ್ಥಿಗಳಲ್ಲಿ 200 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಉನ್ನತ-ಶ್ರೇಣಿಯಲ್ಲಿ-57, ಪ್ರಥಮ ದರ್ಜೆಯಲ್ಲಿ-121, ದ್ವಿತೀಯ ದರ್ಜೆಯಲ್ಲಿ-20, ತೃತೀಯ ದರ್ಜೆಯಲ್ಲಿ-02 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ, ಪ್ರಾಚಾರ್ಯರಾದ ಡಾ. ಎಂ.ಆರ್. ಮಂಜುಸ್ವಾಮಿ, ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಹೇಮಂತರಾಜ ಕೆ., ನಾಗರಾಜ ಗುತ್ತೆದಾರ, ಬಸವರಾಜ ಎಲ್., ಮಲ್ಲಿಕಾರ್ಜುನ ಸಿಂಗನಾಳ, ಅಮಿತಕುಮಾರ ರಡ್ಡಿ ಹಾಗೂ ಕಾಲೇಜಿನ ಉಪನ್ಯಾಸಕರು ಅಭಿನಂದನೆಗಳನ್ನು ತಿಳಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog













